ಗುಬ್ಬಚ್ಚಿ.. ದಿನಾ ಸಂಜೆ ನಿನ್ನ ಒಂದು ಸಲ ನೋಡುವುದು ರೂಢಿಯಾಗಿದೆ.. ಒಂದು ದಿನ ನಿನ್ನ ನೊಡಿಲ್ಲವೆಂದರೆ ಏನೊ ಚಡಪಡಿಕೆ.
ಒಮ್ಮೆ ನಿನ್ನ ನೋಟದೊಡನೆ ನನ್ನ ನೋಟ ಬೆಸೆಯಲಿ ಎಂದು ಕಾಯುತಿರುತ್ತೇನೆ.. ಆದರೆ ಅ ಛತ್ರಿಯ ಪರದೆ ಹಿಂದೆ ಅವಿತಿರುತ್ತವೆ ಅವು. ಮೊನ್ನೆ ನನ್ನ ಮೇಲೆ ಗಾಳಿಗೆ ಅದೇನು ಕರುಣೆ ಬಂತೊ ಕಾಣೆ.. ಓದಿದೆ ಕಣೆ ಗುಬ್ಬಚ್ಚಿ... ನನ್ನ ನೊಡಲೆಂದಿದ್ದ ಅ ಕಾತರಿಕೆಯ ಓದಿದೆ.. ಅ ದಿನ ಗಾಳಿಯಲ್ಲಿ ತೇಲಿದ್ದು ನಿನ್ನ ಗೆಳತಿಯ ಛತ್ರಿಯಲ್ಲ.. ನಾನು.
ಆದರೂ ಈ ಗಾಳಿ ಮಳೆ ಬಿಸಿಲ ಮೇಲೆ ನನಗೆ ಸಿಟ್ಟು... ಯಾಕೆ ಗೊತ್ತ. ಈ ಗಾಳಿ ನಿನ್ನ ಕೂದಲನ್ನು ಸವರುತ್ತ ನನ್ನ ಹಂಗಿಸಿದಂತಾಗುತ್ತದೆ.. ಸಾಲದೆಂಬಂತೆ ಮಳೆ ಹನಿಗಳ ಹೊತ್ತೊಯ್ದು ನಿನ್ನ ಕೆನ್ನೆ ಮೇಲೆ ಬೀಳಿಸುತ್ತೆ.. ಹನಿ ಮಳೆಯ ಜೊತೆ ಸೇರೊ ಅ ಸಂಜೆ ಬಿಸಿಲ ಎಳೆಗೂ ಅದೇ ಭಾಗ್ಯ. ನನ್ನ ಗೆಳೆಯರೆಲ್ಲರೂ ನಿನ್ನ ಗೆಳತಿಯನ್ನೇ ಹೊಗಳುತಿರಲು ನನಗಂತು ಅದು ಉತ್ತರವಿಲ್ಲದ ಪ್ರಶ್ನೆ.ಇವರ ಕಣ್ಣಿಗೇನು ಮಂಕು ಕವಿದಿದೆಯೊ ಎಂದನಿಸುತ್ತೆ. ಹೊಂಗಿರಣದ ಮೈಬಣ್ಣದ ನಿನ್ನ ಮುಂದೆ ಅವಳು ಸರಿಯೆ..! ಸಂಜೆಯ ಆ ಬಿಸಿಲು ನಿನ್ನ ಮೇಲೆ ಬಿದ್ದಾಗ ಅದರ ಹೊಂಬಣ್ಣ ನಿನಗಾಯ್ತೆ ಇಲ್ಲ ನಿನ್ನಿಂದಾಗಿ ಅದು ಹೊಂಬಿಸಿಲಾಯ್ತೆ ನಂಗಂತು ಗೊತ್ತಿಲ್ಲ.
ಮಾತನಾಡಲೆ ಉದಾಸೀನನಾಗಿದ್ದ ನಾನು ಯಾವಾಗ ಕವಿಯಾದೆ ಗೊತ್ತಿಲ್ಲ.. ಎಲ್ಲ ನಿನ್ನ ಕೃಪೆ.
ನೀನು ಹತ್ತಿರ ಬರುತ್ತಿದ್ದಂತೆ ಗೆಳೆಯರ ಮಾತು ಕೇಳಿಸೊಲ್ಲ.. ಒಮ್ಮೆ ನನ್ನ ಕಡೆ ನೊಡುತ್ತಿಯೆನೊ ಎಂಬ ಆಸೆ ಇಂದ ನಿನ್ನೇ ನೊಡುತ್ತಿದ್ದರೆ ನೀನು ಮಾತ್ರ ಗುಮ್ಮನೆಂದು ಹೋಗುತ್ತೀಯಲ್ಲ ಏನು ಹೇಳಲಿ ನಿನಗೆ.
ಅಂದು ಜಢಿ ಮಳೆ ಸುರಿದಂದು ಆಟಕ್ಕೆ ಯಾರು ಬರಲ್ಲ ಎಂದು ಗೊತ್ತಾದಾಗ ಎಲ್ಲಿ ನಿನ್ನ ನೊಡಲಾಗುವುದಿಲ್ಲವೊ ಎಂದು ಅಲ್ಲಿ ಅಂಗಡಿ ಕಟ್ಟೆ ಮೇಲೆ ನಿನಗಾಗಿ ಕಾದೆ. ನೀನು ಅತ್ತಿತ್ತ ನೊಡಿದ ರೀತಿಯಲ್ಲೇ ಗೊತ್ತಾಯಿತು ನೀನು ನನ್ನೆ ಹುಡುಕಿದೆಯೆಂದು.. ಆದರೆ ಮಳೆ ರಭಸಕ್ಕೆ ನಿಂಗೆ ನಾನು ಕಾಣಲಿಲ್ಲವೇನೊ.. ನಿನ್ನ ನಿರಾಸೆ ಆ ಮಳೆಯಲ್ಲು ನನಗೆ ಸ್ಪಷ್ಟವಾಯಿತು.
ಅದು ಕೊಟ್ಟ ಬೆಚ್ಚನೆಯ ಭಾವ ನನ್ನ ಕೈಯಲ್ಲಿದ್ದ ಬಿಸಿ ಚಾಃ ಕಿಂತಲು ಮಿಗಿಲಾಗಿತ್ತು.. ಹಿತವಾಗಿತ್ತು.
ಇಂದು ನಿನ್ನ ಕಂಡಾಗ ಅದೆಲ್ಲಿತ್ತೋ ಧೈರ್ಯ, ನಕ್ಕೆ ನಾನು.. ನಿನಗಾಗಿ. ನಾಳೆ ನಗುವೆ ಏನೆ ಗುಬ್ಬಚ್ಚಿ ನನಗಾಗಿ..?


ಶ್ರವಣ,
ReplyDeleteಬರಹ ತುಂಬಾ ಚೆನ್ನಾಗಿ ಮೂಡಿ ಬಂದಿದೆ.ಶುಭಾಶಯಗಳು.:)
ಮುಂದಿನ ಭಾಗವನ್ನು ಯಾವಾಗ ಪ್ರಕಟಿಸುತ್ತಿದ್ದೀರಿ?
ಇದಕ್ಕಿನ್ನು ಮುಂದಿನ ಭಾಗ ಇಲ್ಲಾರಿ.. :)
ReplyDeleteಧನ್ಯವಾದಗಳು
ಗುಬ್ಬಚ್ಚಿಯ ಮನದಲ್ಲಿ ಬಚ್ಚಿಟ್ಟು ಗರಿಬಿಚ್ಚಿ ಹಾರಿದ ಮನ ಗುಬ್ಬಚ್ಚಿಯಂತೆ ಗಪ್-ಚಿಪ್ ಆಗದೆ ಮಿಡಿದಿದ್ದು ಮತ್ತೆ ಮಿಡಿಯುವ ಆಸೆತೋರಿದ್ದು ಚನ್ನಾಗಿ ಮೂಡಿಬಂದಿದೆ...
ReplyDeleteನನ್ನ ಗೂಡಿಗೂ ಬರುವೆಯಾ ಗುಬ್ಬಚ್ಚಿ...www.jalanayana.blogspot.com
@ಜಲನಯನ,
ReplyDeleteನಿಮ್ಮ ಪ್ರತಿಕ್ರಿಯೆ ಚೆನ್ನಾಗಿದೆ.. :) ಪ್ರೋತ್ಸಾಹಕ್ಕೆ ಧನ್ಯವಾದಗಳು.. ಬರುತ್ತಿರಿ.
chendada baraha...
ReplyDelete@ಸವಿಗನಸು,
ReplyDeleteಧನ್ಯವಾದಗಳು..
Shravana avre... Nimma First part oodidaaga i thought U were tellig abt a guy... but in the second part only I came to know that its about Sparrow.... M i correct this time????
ReplyDelete@ವಿನಯ್,
ReplyDeleteಹಃ ಹಃ.. :) ಮೊದಲನೆಯ ಭಾಗ ಗುಬ್ಬಚ್ಚಿ ಹೇಳ್ತಿರೋದು.. ಎರಡನೆಯದು ಗುಬ್ಬಚ್ಚಿಯ ಪ್ರೇಮಿ ಹೇಳ್ತಿರೊದು.
ಸುಂದರವಾದ ಲೇಖನ
ReplyDeleteಕುತೂಹಲ ಮೂಡಿಸಿ ನಂತರ ತೆರೆ ಎಳೆದಿದ್ದಿರಿ
ಸೊಗಸಾದ ನಿರೂಪಣೆ
@ಇಂಚರ,
ReplyDelete:) ಧನ್ಯವಾದಗಳು.. ಬರುತ್ತಿರಿ.