Tuesday, May 4, 2010

ಪ್ರೀತಿಯ ತಂಗಾಳಿಗೆ ಮುಖವೊಡ್ಡುತ್ತಾ...

ನನ್ನ ಮೆಚ್ಚಿನ ಹಾಡಿನ ಬಗ್ಗೆ ಹೇಳಬೇಕಿಂದು.

ಅಮೃತವರ್ಷಿಣಿಯ ಹಾಡು ಎಲ್ಲಾರಿಗು (almost) ಇಷ್ಟವಾಗುವಂತಹುದೆ..

ಕೆ. ಕಲ್ಯಾಣ್ ರವರ ಸುಂದರ ಸಾಹಿತ್ಯ, ಅಷ್ಟೇ ಸುಮಧುರ ಸಂಯೊಜನೆ ದೇವ ಅವರಿಂದ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಗಾಯನ ಧೈವ ಮಾಧುರ್ಯ.

ಒಂದು ಕ್ಷಣ ಹಾಡಿರೊರ ಮರೆತು,ಅದರ ಸಿನಿಮೀಯ ಚಿತ್ರಣ ಮರೆತು ಕೇಳಬೇಕು ಸಿಗೊ ಆನಂದ ಸವಿಯಲು..

ಇನ್ನು ಪ್ರೀತಿಯಲ್ಲಿ ಮಿಂದವರಿಗಂತು ಸುಲಭವಾಗಿ ಹೃದಯಕ್ಕೆ ತಾಕುತ್ತೆ ಇದು.

ಪ್ರೀತಿಯ ಸತ್ಯ, ಭಾವನೆಯ ಅರ್ಥ, ಮನಸ ಅರ್ಪಣೆ, ಅದ ಹೇಳೊ ಪರಿ.. ದಿವ್ಯ.

ಹಾಡಿನ ಮದ್ಯ ಬರೊ ಸಣ್ಣ ಬಡಿತಗಳು ಇನ್ನೂ ಸುಂದರ.


ಪದಗಳು ನಿಮಗಾಗಿ.. ನನಗಾಗಿ.. ಪ್ರೀತಿಯ ತಂಗಾಳಿಗೆ ಮುಖವೊಡ್ಡುತ್ತಾ.


********************

ಮನಸೇ.. ಮನಸೇ..

ಬದುಕು ನಿನಗಾಗಿ ಬವಣೆ ನಿನಗಾಗಿ

ನನ್ನ ಪ್ರೀತಿಯೇ ಸುಳ್ಳಾದರೆ ಜಗವೆಲ್ಲ ಸುಳ್ಳು ಅಲ್ಲವೇ ||


ನಿನ್ನ ಒಂದು ಮಾತು ಸಾಕು ಮರುಮಾತು ಎಲ್ಲಿ

ನಿನ್ನ ಒಂದು ಆಣತಿ ಸಾಕು ನಾ ಅಡಿಗಳಲ್ಲಿ

ನಿನ್ನ ಒಂದು ಹೆಸರೇ ಸಾಕು ಉಸಿರಾಟಕಿಲ್ಲಿ

ನಿನ್ನ ಒಂದು ಸ್ಪರ್ಶ ಸಾಕು ಜನುಮದಲ್ಲಿ

ಮನಸೇ ನಾ ಏನೇ ಮಾಡಿದರು ನಿನ್ನ ಪ್ರೀತಿಗಲ್ಲವೇ

ಮನಸೇ ಮನಸ ಕ್ಷಮಿಸೆ..||


ನನ್ನ ಪ್ರೀತಿ ಗಂಗೆ ನೀನು ಮುಡಿಸೇರಲೆಂದೇ

ಸಮಯಗಳ ಸರಪಳಿಯಲ್ಲಿ ಕೈ ಗೊಂಬೆಯಾದೆ

ನನ್ನ ಬಾಳ ಪುಟಕೆ ನೀನು ಹೊಸ ತಿರುವು ತಂದೆ

ನಿನ್ನ ಮರೆತು ಹೋದರೆ ಈಗ ಬದುಕೇಕೆ ಮುಂದೆ

ಮನಸೇ ನಾ ಏನೇ ಮಾಡಿದರು ನಿನ್ನ ಪ್ರೀತಿಗಲ್ಲವೇ

ಮನಸೇಮನಸ ಹರಿಸೆ..||

********************


- ಶ್ರವಣ


5 comments:

  1. I too just love this song. Supurb lyrics by Kalyan and beautiful singing by SPB... Neevu helidanthe hrudayavannu thattuvanthaha saalugalu.. Thanks for the lyrics Shravana.

    ReplyDelete
  2. Me too love this beautiful song, but didn't know the full lyrics, thanks for it Shravana, and I liked the way you introduced the song before giving lyrics, very nice words, keep writing...

    ReplyDelete
  3. @Vandana: Pleasure is mine.. :)

    @Rashmi: Am happy that you liked it.. really it's an amazing song.. It heals me from which eva bad mood am in.

    ReplyDelete
  4. It relaxes u to core... the music n lyrics syncs so much and together the blend of it is ultimate.. :)

    ReplyDelete