Monday, October 25, 2010

ನೆನಪು


ನಿನ್ನ ನೆನಪು..

ಯಾಕೊ ಎನೊ ಇತ್ತೀಚ್ಚೆಗೆ ಬರೊದು ತುಂಬಾ ಕಮ್ಮಿಯಾಗಿದೆ, ಕೆಲವು ಸಂದರ್ಭಗಳನ್ನು ಹೊರತುಪಡಿಸಿ.


ನಿನ್ನ ನೆನಪು ಬರುತ್ತೆ ಕೆಲವೊಮ್ಮೆ ಮಾತ್ರ. ಯಾವಾಗ ಗೊತ್ತೇ?


ಬಾಲ್ಕನಿಯಲ್ಲಿ ಕುಳಿತಾಗ ಸಣ್ಣಗೆ ಬೀಸೋ ಗಾಳಿ ಮುಖಕ್ಕೆ ಕಚಗುಳಿ ಇಟ್ಟಾಗ ಮಾತ್ರ. ಅದರ ಯಾವುದೊ ಒಂದು ತರಂಗದಲ್ಲಿ ನಿನ್ನ ಧ್ವನಿ ಕೇಳಿದಂತಾದಾಗ ಮಾತ್ರ. ಬರಿ ಸಂಜೆಯಷ್ಟೆ ಅಲ್ಲಿ ಇರುತ್ತೆನಾದ್ದರಿಂದ ನಿನ್ನ ನೆನಪು ಆ ಹೊತ್ತಿಗಷ್ಟೆ.


ಬೆಳಗ್ಗೆ ಎದ್ದು ಕನ್ನಡಿ ನೋಡಿದಾಗ ನನ್ನ ಕಣ್ಣಲ್ಲಿ ನಿನ್ನ ಬಿಂಬ ಕಂಡಂತಾಗುತ್ತದೆ, ನಿನ್ನ ಕಂಗಳ ನೆನಪಾಗುತ್ತೆ ; ನಾನೇನು ಇಡೀ ದಿನ ಕನ್ನಡಿ ಮುಂದಿರುತ್ತೆನೆಯೆ?!


ಕೂದಲು ಬಾಚಬೇಕಾದರೆ ಮಾತ್ರ ನನ್ನ ಕೊದಲಲೊಳಗೆ ಕೈಯಾಡಿಸುತ್ತ ಇದ್ದೆಯಲ್ಲ ಆ ನೆನಪು ನುಗ್ಗಿ ಬರುತ್ತೆ. ನಾ ನಿನ್ನ ಬಳಿ ಬಂದರೆ ಸಾಕು ನನ್ನ ಕೂದಲಿಗೆ ಹಾಕಿರೊ ಕ್ಲಿಪ್ ನ ತೆಗೆಯುತ್ತಿದ್ದೆಯಲ್ಲ ಅದೇನು ದ್ವೇಷವಿತ್ತು ನಿನಗದರೆ ಮೇಲೆ?

ಪ್ರತಿ ಬಾರಿ ಕೂದಲು ಕತ್ತಿರಿಸಲೆಂದು ಮನಸು ಮಾಡಿದಾಗಲ್ಲೆಲ್ಲ ನಿನಗಿದ್ದ ಉದ್ದ ಜಡೆ ವ್ಯಾಮೊಹ ನೆನೆದು ಕೈಚೆಲ್ಲುತ್ತೇನೆ.


ಗಾಳಿಯಲ್ಲಿ ಬರೊ ಯವುದೊ ಪರಿಮಳ ನಿನ್ನ ನೆನಪ ಹೊತ್ತು ತರುತ್ತೆ, ನನ್ನ ಕೈ ಹಿಡಿಯಲು ನೆಪ ಹುಡುಕುತ್ತಿದ್ದ ನಿನ್ನ ತುಂಟಾಟಗಳ ನೆನಪ ತರುತ್ತೆ ; ನಾನಾಗೆ ನಿನ್ನ ನೆನಪು ಮಾಡಿದಲ್ಲಪ್ಪ.


ಒಂದು ಕಪ್ ಬೆಚ್ಚಗಿನ ಹಾಲು ಕೈಯಲ್ಲಿ ಹಿಡಿದು, ಹಬೆಯಾಡಿಸುತ್ತಾ ಕುಡಿಯಬೇಕಾದರೆ, ಅಂದು ನಿನ್ನ ನೊಟಕ್ಕೆ ಗಾಬರಿಗೊಂಡು, ಮೈಮೆಲ್ಲೆಲ್ಲ ಹಾಲು ಚೆಲ್ಲಿ ಅವಾಂತರ ಮಾಡಿದ್ದು ನೆನಪಾಗಿ ನಗೆಯುಕ್ಕಿ ಬರುತ್ತೆ.


ಕೈಗೆ ಮೆಹಂದಿ ಹಚ್ಚುಲು ಕುಳಿತರೆ. ನೀನು ನನ್ನ ಕೈಯಲ್ಲದು ಕೆಡು ಬಣ್ಣಕ್ಕೆ ತಿರುಗೊವಾಗ ಹುಬ್ಬೆರಿಸುತ್ತಿದ್ದ ಕ್ಷಣ ನೆನಪಾಗುತ್ತೆ. ಹಾಗೇನು ನಾನು ಯವಾಗಲು ಮೆಹಂದಿ ಹಚ್ಚುತ್ತೇನೆಯೆ?!


ಮುಖಕ್ಕೆ ನೀರು ಚಿಮ್ಮಿಸುವಾಗ, ಅಂದು ಎನೋ ಹೇಳಲೆಂದು ಹೊಗಿ ನೀನು ಬರಿಯೆ ಸುಮ್ಮನಾಗಿ, ಕಣ್ಣು ಮಿಟಿಕಿಸಿ ನನ್ನ ಮುಖಕ್ಕೆ ನೀರು ಚಿಮ್ಮಿಸಿದೆಯಲ್ಲಾ ಬರಿ ಅದೇ ನೆನಪು. ಮೌನವಾಗೆ ಪ್ರೀತಿಯ ಅ ಮೂರು ಪದಗಳ ನನಗಾಗಿ ಉಸುರಿದ್ದೆಯಲ್ಲ ಆ ನೀರ ಹನಿಗಳ ಮೂಲಕ !


ಮೊಬೈಲ್ ಕೈಗೆತ್ತಿಕೊಂಡಾಗ ನಿನ್ನುಸಿರು ಕೇಳುತ್ತಾ, ನನ್ನುಸಿರು ಬೆರೆಸುತ್ತ ಕಳೆದ ಆ ಕ್ಷಣಗಳ ನೆನಪಾಗುತ್ತೆ.


ಹೀಗೆ ಕೆಲವು ಸಂದರ್ಭಗಳಲ್ಲಿ ಮಾತ್ರ ನಿನ್ನ ನೆನಪು ಕಾಡುತ್ತೆ. ಹಾನ್ ಇನ್ನು ಒಂದು ಬಾಕಿಯಾಯಿತ್ತಲ್ಲಾ. ಪ್ರತಿಸಲ ಗಾಳಿಯನ್ನು ನನ್ನ ಮೈ ತುಂಬುತ್ತೇನಲ್ಲಾ ಆಗ ಮಾತ್ರ ಅದರಲ್ಲಿ ನಿನ್ನ ನೆನಪೆ ತುಂಬಿ ಬರುತ್ತೆ. ಅಷ್ಟೆ... ನಾನೇನು ದಿನಾ ಉಸಿರಾಡುತ್ತೇ..ನೆ....ಯೇ.... ?!!!


6 comments:

  1. ಪ್ರತಿಯೊಂದು ಸಾಲುಗಳೂ ಚೆನ್ನಾಗಿವೆ...! ತುಂಬಾ ಇಷ್ಟ ಆಯಿತು ಶ್ರಾವಣ....

    ಪ್ರತಿಸಲ ಗಾಳಿಯನ್ನು ನನ್ನ ಮೈ ತುಂಬುತ್ತೇನಲ್ಲಾ ಆಗ ಮಾತ್ರ ಅದರಲ್ಲಿ ನಿನ್ನ ನೆನಪೆ ತುಂಬಿ ಬರುತ್ತೆ. ಅಷ್ಟೆ... ನಾನೇನು ದಿನಾ ಉಸಿರಾಡುತ್ತೇ..ನೆ....ಯೇ.... ?!!!

    ಇದ೦ತೂ ಮಾಸ್ಟರ್ ಪೀಸ್!

    ReplyDelete
  2. @ ಸುಧೇಶ್,

    ಧನ್ಯವಾದಗಳು..
    Am glad you liked it.. :)

    ReplyDelete
  3. ಶ್ರವಣ ಸರ್,

    ನಿಮ್ಮ ಬರಹ ತುಂಬಾ ಚೆನ್ನಾಗಿದೆ. ಮತ್ತೆ ಮತ್ತೆ ಓದಬೇಕೆನಿಸುತ್ತದೆ...keep it up...

    ReplyDelete
  4. @Shivu,

    ಧನ್ಯವಾದಗಳು.. :) ಬರುತ್ತಿರಿ.

    ReplyDelete