Tuesday, December 7, 2010

ಹೇಳಲೇನು ಸಾಧ್ಯ



ನೆನಪುಗಳು ಸ್ಮೃತಿ ಪರದೆಯ ಮೇಲೆ ಬರೆದ ಚಿತ್ರಗಳಂತೆ. ಗೈಗೆಟುಕದ ಪರದೆಯ ಚಿತ್ರ ಅಳಿಸುವುದಾದರು ಹೇಗೆ? ಹೃದಯಕ್ಕೆ ಹೇಗೆ ಬಿಡಿಸಿ ಇದ ಹೇಳಲಿ. ಹೇಳಬೇಕೆಂದಿರುವ ನೂರು ಮಾತು ತುಟಿಯಂಚ ದಾಟಲೊಪ್ಪವು. ಹೇಳದೆಯೇ ಇವನ್ನ ಕೇಳುವೆಯಾ? ಈತರ ಮೌನಿಯಗಿರುವೆ ಯಾಕೆ?


ನಮ್ಮ ಕಥೆಯೇಕೆ ಅಪೂರ್ಣವಾಗಿ ಉಳಿಯಿತು? ಅಂತರ ಹೇಗೆ ಸೃಷ್ಟಿಯಾಯಿತು? ಇಬ್ಬರ ಹೃದಯದಲ್ಲೂ ಮಡುಗಟ್ಟಿರುವ ಅಪರಿಚಿತ ನೋವಿನ ಪರಿ ತಿಳಿಯದಾಗಿದೆ. ಇದು ಕಡಿಮೆಯಾಗಲೊಪ್ಪುವುದೇ? ಬರಿ ಪ್ರಶ್ನೆಗಳು.. ಯಾರೆನು ಹೇಳಲು ಸಾಧ್ಯ !


ಜೀವನದ ಅದಾವುದೊ ತಿರುವಿನಲ್ಲಿ ಒಂಟಿತನ ನಾವಿಬ್ಬರೂ ಕೇಳಿ ಪಡೆದೆವೆ? ಯಾರಲ್ಲಿರಲು ಸಾಧ್ಯ ಉತ್ತರ. ಭಗ್ನ ಘಳಿಗೆಯಗಳ ಸುಳಿಯಲ್ಲೇಕೆ ಇಂದಿನ ಘಳಿಗೆ ಸಿಲುಕಿದೆ? ಸದಾ ನಿನ್ನ ಬಳಿ ಇರಬೇಕೆಂಬ ನನ್ನ ಪ್ರಾರ್ಥನೆ ಉಸಿರಲ್ಲೇ ಬೆರೆತ್ತಿದ್ದರೂ, ಅಂತರ ಎಲ್ಲಿಂದ ಬಂತು?


ನಿನ್ನ ಸಂಧಿಸಿ ಹೀಗೆ ಇಂದು, ನೆನಪಾಗುತ್ತಿವೆ ಹಳೆ ಕ್ಷಣಗಳು. ಕಣ್ಣಿನಿಂದ ನೀರ ಬಿಂದು ಚೆಲ್ಲುತ್ತಿವೆ ಏಕೆ? ಹನಿ ನೀರಿಗೇನು ಹೇಳಲು ಸಾದ್ಯ. ನೀ ನನ್ನ ನೋಡಿದ ಬಗೆಯಿಂದ ಏಕೊ ಏನೋ ಹೃದಯದಲ್ಲೊಂದು ಆಶಾಭಾವನೆ..ನಿನ್ನಿಂದ ಪ್ರೀತಿ ಪಡೆಯಲು ಇನ್ನೊಮ್ಮೆ. ಹುಚ್ಚು ಹೃದಯಕ್ಕೇನು ಹೇಳಲು ಸಾಧ್ಯ.


ಜೀವನದ ದಾರಿಯಲ್ಲಿ ಎಷ್ಟೊಂದು ದೂರ ಕ್ರಮಿಸಿದ್ದೇವೆ.. ಹಿಂತಿರುಗಿ ನೊಡುತಲೀಗ ಮನಸಿನ ತುಮುಲಗಳ, ತಿಳಿಯದಾಗಿದೆ ಹೇಗಾಯ್ತು ಇಷ್ಟೊಂದು ಅಂತರ. ನಾನೇನು ಹೇಳಲು ಸಾಧ್ಯ.


ತುಂಬಾ ಇಷ್ಟವಾಗುವ ಹಿಂದಿ ಚಲನಚಿತ್ರ ಗೀತೆಯೊಂದರ ಪ್ರೇರಿತ ಸಾಲುಗಳು.

ಸಾಧ್ಯಯವಾದಲ್ಲಿ ಗೀತೆ ಯವುದೆಂದು ಊಹಿಸಿ.. :)


-ಶ್ರವಣ