Thursday, February 6, 2014

ಸ್ನೇಹ ಪ್ರೀತಿ ಸ್ನೇಹ...



ಯಾರು ನೀನು ನನಗೆ?  ಉತ್ತರ ಒಂದೇ ಎಂದು ತಿಳಿದರೂ ಇನ್ನೊಂದು ಉತ್ತರಕ್ಕಾಗಿ ಮನ ಏಕೆ ಹಂಬಲಿಸುತ್ತಿದೆ? ಯಾವುದಾರೂ ಸರಿಯೆ, ಅದೊಂದನ್ನು ಹೊರತು ಪಡಿಸಿ. ವರುಷಗಳ ಏಕತಾನತೆಯ ಮಧ್ಯೆ ಹೊಸ ಗಾಳಿಯಂತೆ ಬಂದ ನಿನ್ನ ಪ್ರೀತಿಸಿದ್ದು ತಪ್ಪೆ? ನಾನು ಪ್ರೀತಿ ಎಂದೆನೆ?! ಇದೆ ಬೇಡವಾಗಿರುವ ಉತ್ತರ. ನನಗಿನ್ನು ಸ್ಪಷ್ಟವಾಗಿಲ್ಲದ ಒಗಟು. ಮನಸ್ಸಿನ ತುಮುಲ ಹಾಗೆ ಇದ್ದರೆ ಒಳ್ಳೆಯದೆನಿಸಿದೆ. ಈ ಒಂದು ಒಗಟು ಒಗಟಾಗಿಯೆ ಇಲರೆಂದು ಬಯಸುವೆ. ಕಾರಣ ನೀನೆಲ್ಲಿ ದೂರವಾಗುತ್ತೀಯೊ ಎಂದು. ನಿನ್ನ ಸ್ನೇಹ ನನಗೆ ವಸಂತ ಋತುವಿನಂತೆ.. ಅಲ್ಲ ಮಳೆಯಂತೆ.. ಊಹುಮ್ ಬಿಸಿಲಂತೆ.. ಚಳಿಯತೆ.. ಹೇಗಿದ್ದರೂ ಬೇಕಿದೆ. ಈ ಪ್ರೀತಿಯ ಸುಳಿಯಲ್ಲಿ ಸಿಲುಕಿ ಪ್ರಶಾಂತ ಹರಿವಿನಂತಃ ನಿನ್ನ ಸ್ನೇಹ ಕಳೆದುಕೊಳ್ಳಲಾರೆ.

ಯಾವಾಗ, ಯಾಕೆ, ಮನಸ್ಸು ಈ ಪ್ರೀತಿಯ ಮಾಯೆಗೆ ಸಿಲುಕಿತೊ ಗೊತ್ತಿಲ್ಲ. ಮಾಯೆಯೆ ಸರಿ. ಇಲ್ಲವಾದಲ್ಲಿ ಧರ್ಮ, ವಯಸ್ಸು ಮೀರಿ ಪ್ರೀತಿಯ ಅನುಭೂತಿ ಪಡೆಯಲು ಸಾಧ್ಯವಿಲ್ಲ. ನೀನು ನನ್ನ ಬಗ್ಗೆ ಈ ರೀತಿ ಯೋಚಿಸುತ್ತಿಲ್ಲವೆಂದು ಗೊತ್ತಿದ್ದರೂ ಮನೆವೇಕೆ ಹೀಗೆ ಚಂಚಲ? ಇದೆಂತ ಭಾವನೆಗಳು, ನನಗೆ ಸ್ಪಷ್ಟವಿಲ್ಲ.. ನಿನ್ನ ಕಣ್ಣುಗಳಲ್ಲಿ ಅಂತಃದೇನಿದೆ.. ಅದನ್ನೇ ನೋಡಬೇಕೆನಿಸುವುದೇಕೆ.. ನಿನ್ನ ನಗುವಲ್ಲೆನಿದೆ.. ನನ್ನ ಮನ ಅರಳುವಂತಃದ್ದು.. ಮನಸ್ಸು ಗೊಂದಲಗಳ ಗೂಡಾಗಿದೆ.  ಆದರೆ ನಿನ್ನೊಂದಿಗೆ ಕಳೆವ ಕ್ಷಣಗಳಲ್ಲಿ ಗೊಂದಲಗಳು ಮಾಯ. ನೀನು ವೀಣೆಯ ಶ್ರುತಿಯಂತೆ.. ಮೀಟಿದಾಗ ನನ್ನ ಮನ ತಿಳಿ ನೀರಂತೆ. ಮರು ಕ್ಷಣ ಹುಚ್ಚು ಹೊಳೆಯ ಹರಿವಿನಂತೆ.. ಕಲಕಿದಂತೆ. ಅಂತರಂಗದ ಗೆಳೆಯ ನೀನು.. ಹೇಳು ಹೀಗೇಕಾಗುತ್ತಿದೆ..

ಓಮ್ಮೆ ಪ್ರೀತಿಯಲ್ಲಿ ಸೋತು ಮುದುಡಿದ ಮನಕ್ಕೆ ನಿನ್ನ ಮೇಲೇಕೆ ಈ ಭಾವನೆ..? ಒಂದು ಗೀತೆಯ ಸಾಲು ಕೇಳಿರುವೆಯ.. ಪರಸ್ಪರ ತಾಗಿ ಮೈಲಿ ದೂರ ಸಾಗಿದರೂ ಹಾಯಿ ದೋಣಿಗೆಂದೂ ಕಡಲ ಆಳ ತಿಳಿಯದು.. ಅದೇ ರೀತಿ ಇದ್ದವಳು ನಾನು. ಕಡಲಾಳದಲ್ಲೆಲ್ಲೋ ಕಳೆದು ಹೊಗಿರುವಂತಿದ್ದ ನನಗೀಗ ನಿನಗಾಗಿ ಮೇಲೆ ಬರೊ ಆಸೆ.  ಆದರೆ... ಜೀವನ ಸತ್ಯ ಕನ್ನಡಿಯಂತೆ ಮುಂದಿದ್ಡರೂ ನೊಡಲ್ಲೊಪ್ಪದು ಮನ.  ಮುಚ್ಚಿದ ಕಣ್ಣುಗಳ ಹಿಂದಿನ ಕನಸುಗಳನ್ನೆ ಬಯಸುತ್ತಿದೆ. ನೀನು ಪ್ರೀತಿಸಿವುದಿರಲಿ ಅದರ ಯೊಚನೆಯೂ ಮಾಡಲಾರೆ. ಆದರೆ ಹುಚ್ಚು ಜೀವ. ಎನು ಮಾಡಲಿ? ನಿನ್ನ ಪ್ರೀತಿಯ ಸೆಲೆ ಎಲ್ಲೊ ಇದೆ.. ಗೊತ್ತಿದೆ. ಪ್ರತಿಯೊಂದು ನಕ್ಷತ್ರ ಸೂರ್ಯವಾಗಲಾರದು.. ನಾನು ಆಗಲು ಬಯಸುವುದೂ ಇಲ್ಲ. ಪ್ರೀತಿಗಿಂತ ನನಗೆ ನಿನ್ನ ಸ್ನೇಹ ಮುಖ್ಯ. ನನ್ನ ಮನಸ್ಸಿನ ತಕಲಾಟದಿಂದ ನಿನ್ನ ಮನ ನೊಂದಿರ ಬಹುದು. ಇದನ್ನೆಲ್ಲಾ ಖಂಡಿತ ಅಳಿಸಿ ಹಾಕುವೆ.. ಹೊರ ಬರುವೆ... ನಿನ್ನ ಗೆಳತಿಯಾಗಿ.

No comments:

Post a Comment