ಈ ಚಿತ್ರ ನಮ್ಮ ನೆರೆ ಮನೆಯದ್ದು.. ಅಲ್ಲ ಮನೆ ಇದ್ದ ಜಾಗದ್ದು.
ಒಳ್ಳೆ ಬೆಲೆ ಸಿಕ್ಕಿತೆಂದು ಜಮೀನು ಮನೆ ಮಾರಿ ಅಲ್ಲಿದ್ದ ತುಂಬು ಕುಟುಂಬ ಬಂದ ಹಣ ಪಾಲು ಮಾಡಿ ಬೇರೆಯಾಯಿತು. ಮನೆ ಹಂಚು ತೆಗೆದ ಕಾರಣ ಕಳೆದ ಮಳೆಗಾಲಕ್ಕೆ ಗೊಡೆಗಳು ಕುಸಿದಿವೆ. ಈ ಮಳೆಗಾಲಕ್ಕೆ ಇದು ಮಣ್ಣಲ್ಲಿ ಮಣ್ಣಾಗೊ ಮೊದಲು ನೆನಪಿಗಿರಲೆಂದು ಈ ಫೊಟೊ ಕ್ಲಿಕ್ಕಿಸಿದೆ.
ದಿನವಿಡಿ ಕಿರುಚುತ್ತ ಮಕ್ಕಳು ಕೇಕೆ ಹಾಕುತ್ತಿದ್ದ ಇದರ ಅಂಗಳದಲ್ಲೀಗ ಬರೀ ಗಿಡ ಗಂಟಿ ಪಾಚಿ.
ಯಾವುದು ಶಾಶ್ವತವಲ್ಲ.. ಆದರೂ ಸುಮಾರು 70 ವರ್ಷ ಒಂದು ಕುಟುಂಬ ಬಾಳಿ ಬದುಕಿದ ಮನೆಯ ಈ ಸ್ಥಿತಿ ನೊಡುವಾಗ ಮನಸಿಗೆಕೊ ಕಸಿವಿಸಿ.
ದಾಸರು ಹೇಳಿದಂತೆ.. ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೆ.. ಅಲ್ಲವೆ?
-ಶ್ರವಣ

'Change is the only constant thing in life', its very true but again memories will always be constant. Keep writing Shravana...
ReplyDeleteNija shravana... nimma ee prayatna nijavaaglu shlaaganiya...!!! namme naduve baali badukida jana ommele maayavaadare ee kasivisi khandita... manasigeno talamala..!!!! nimma manasina suuksmate illi gottaaguttade..!!!
ReplyDelete@Rashmi,
ReplyDeleteTrue, well said.. Thank you for visiting..
@Vinay,
ReplyDeleteಬಾಳಿ ಬದುಕಿದ ಜನರಿಂದಲೂ ಜೀವನದ ನಶ್ವರತೆ ಕಾಡೊ ವಿಷಯ. ನಾವು ಶಾಶ್ವತ ಎಂಬಂತೆ ಆಡೊ ಮೊದಲು ಈ ಕಸಿವಿಸಿ ನೆನಪಾದರೆ, ಅರ್ಥ ಪೂರ್ಣ ಬದುಕು ನಮ್ಮದಾಗಬಹುದೇನೋ..
ಧನ್ಯವಾದಗಳು ಸ್ಪಂದಿಸಿದಕ್ಕೆ.
ಶ್ರವಣ...ನಿಜ ಜೀವನ ನೀರ ಮೇಲಣ ಗುಳ್ಳೆ ನಿಜವಲ್ಲ....ಹಳೆ ಮನೆಗಳ ಅಂಗಳ ಕಿಲಕಿಲಿಸಿದ ದಿನ ನೆನಪಾಗೋದು ಸಹಜ
ReplyDelete@ಜಲನಯನ,
ReplyDeleteನಿಜ, ಹಾಗೆ ನೆನಪಿಗಿರಲೆಂದು ಇಲ್ಲಿ ಹಾಕಿದೆ.. ಮೊದಲಿನ ಚಿತ್ರ ಇಲ್ಲವಲ್ಲಾ ಅನ್ನೋದು ಬೇಸರ.
ಧನ್ಯವಾದಗಳು..ಬರುತ್ತಿರಿ.