Thursday, July 15, 2010

ರಾಗ-ಅನುರಾಗ

ಸುಮಾರು ಒಂದು ತಿಂಗಳ ಹಿಂದೆ, ಬ್ಲಾಗ್'ಗಾಗಿ ನಾನು ಬರೆದ ಮೊದಲನೆಯ ಕಥೆ. ಪ್ರಕಟಿಸಲೇಕೊ ಮನಸೇ ಬರುತ್ತಿರಲ್ಲಿಲ್ಲ. ಇವತ್ತು ಇದಕ್ಕೆ draftನಿಂದ ಮುಕ್ತಿ ದೊರಕಿಸುತ್ತಿದ್ದೇನೆ, ಇದೆ ಕೊನೆಯದಾಗದಿರಲೆಂದು ಆಶಿಸುತ್ತಾ :) ...


ರಾಗ-ಅನುರಾಗ


ದಿನಾ ಮುಂಜಾನೆ ಇನ್ನೇನು ಬಿರಿಯುತಿರೊ ಮೊಗ್ಗು ಕೀಳಲು ಹೊಗುವುದೆಂದರೆ ಸ್ವರ್ಣಗೆ ಎಲ್ಲಿಲ್ಲದ ಖುಶಿ. ತಂಪು ಮುಂಜಾವಿನಲಿ ಇಬ್ಬನಿಗಳ ಜೊತೆ ಆಟವಾಡುತ್ತಾ , ಚಿಲಿಪಿಲಿ ಕಲರವ ಅಹ್ಲಾದಿಸುತ್ತಾ ಸಮಯ ಕಳೆಯೋದೆ ಗೊತ್ತಾಗುತ್ತಿರಲ್ಲಿಲ್ಲ. ಯಾವತ್ತಿನಂತೆ ಇಂದು ಕೂಡ ಹೂದೊಟಲ್ಲಿ ಸುತ್ತಾಡುತ್ತಿರಲು ಅವಳ ದೃಷ್ಟಿ ತಮ್ಮ ಪಕ್ಕದ ತೊಟದ ಮನೆಯ ಅಂಗಣಕ್ಕೆ ನೆಟ್ಟಿತು. ಅಲ್ಲಿ ಯಾರೊ ವ್ಯಾಯಾಮ ಮಾಡುತ್ತಿರುವುದು ಕಂಡಿತು.

"ಹ್ಮ್ ಇವನೆ ಏನು ಅರುಣ ಅಂದ್ರೆ.. ಅಳಿಯ ಮಾಡಬೇಕೆಂದು ಅಪ್ಪ ಅಮ್ಮ ಕುಣಿತಿರುವುದು."

ಸರಿಯಾಗಿ ನೋಡೊಣ ಎಂದುಕೊಂಡು ಕಾಲ್ ಬೆರಳ ತುದಿಯಲ್ಲಿ ಇಣುಕುತ್ತಿರಲು , ಅವನು ತನ್ನತ್ತ ತಿರುಗಿ ಮುಗುಳ್ನಕ್ಕು ಕೈ ಬೀಸಿದಾಗ "ಪರಿಚಯ ಇಲ್ಲ ಎನಿಲ್ಲ ಕೈ ಬೇರೆ ಬೀಸ್ತಾನೆ" ಅಂದು ಕೊಂಡು ಅವನೆಡೆ ಬೆನ್ನು ಹಾಕಿ ಮನೆಗೆ ಹಿಂದಿರುಗುತ್ತಾಳೆ.


ಹುಡುಗಿಯರು ಮಾರು ಹೊಗೊವಂತ ಚೆಲುವ ಅರುಣ. ಕೆನ್ನೆಯಲ್ಲಿ ಗುಳಿ ಮುಡೊ ಅವನ ಕಿರುನಗೆಗೆ ಹುಡುಗಿಯರು ಕಾಯುತ್ತಿರುತ್ತಾರೆ. ಆದರೆ ಹುಡುಗಿ.. ! ಯಾವಾಗಿನಿಂದ ಅಮ್ಮ ಸ್ವರ್ಣನ ಬಗ್ಗೆ ಹೇಳಿದರೊ ಅವಳು ಸೊಸೆಯಾಗಿ ಬಂದರೆ ಚೆನ್ನ ಎಂದು, ಇಲ್ಲಿ ಬಂದ ಒಂದು ತಿಂಗಳಿನಿಂದ ಅವಳನ್ನ ಮಾತಡಿಸಲು ಕಾಯುತ್ತಿದ್ದನವನು.

ಸೂರ್ಯೊದಯದ ಮೊದಲೆ ಎದ್ದು ವ್ಯಾಯಾಮ ಮಾಡೋದು ಅವನ ಅಭ್ಯಾಸ. ಅಂದೊಮ್ಮೆ ತೊಟದಲ್ಲಿ ಸುತ್ತಾಡುತ್ತಿದ್ದವಳ ಕಂಡ ನಂತರ ಮಹಡಿಯ ಮೆಲೆ ಮಾಡಲಾಗುತ್ತಿದ್ದ ವ್ಯಾಯಾಮ ಅವಳ ಮನೆಬೇಲಿಯಂಚಿನ ಅಂಗಣಕ್ಕೆ ಸ್ತಳಾಂತರವಾಗಿತ್ತು.. ಹಸಿರ ನಡುವೆ ನಳನಳಿಸೊ ಹೊವೆ ನಿಜ. ಇಂದು ಮಾತನಾಡಿಸೋಣ ಎಂದು ಕೈ ಬೀಸಿದರೆ ತಿರುಗಿ ಹೊಗೆ ಬಿಟ್ಲಲ್ಲಾ ಎಂದು ಕೊಳ್ಳುತ್ತ ಮನೆಯೊಳಗೆ ಹೊದ ಅರುಣ.

"ಅಪ್ಪ ಅಮ್ಮನಂತು ಅರುಣನ ಮೆಚ್ಚಿದ್ದಾರೆ.. ಆದರೆ ನನ್ನ ಇಚ್ಚೆ ಅವರಿಗೆ ಹೇಗೆ ಹೆಳಲಿ.. ಅವರ ಮನ ನೊಯಿಸಲು ಸಾಧ್ಯವಾಗದು ಏನು ಮಾಡಲಿ" ಯೊಚಿಸುತ್ತಾ ಕುಳಿತ್ತಿದ್ದವಳಿಗೆ ಅಮ್ಮ ತನ್ನ ಕೂಗಿದ್ದು ಕೇಳಿದಾಗ ಲಘು ಬಗೆ ಇಂದ ಬಂದವರಾರು ಎಂದು ನೋಡಲು ಮಹಡಿ ಇಳಿದು ಬಂದಳು.

ಸುತ್ತಲೂ ಕಣ್ಣಾಡಿಸುತ್ತಾ ನಿಂತಿದ್ದ ಅರುಣನಿಗೆ ಮೆಟ್ಟಿಲಿಳಿದು ಬರುತ್ತಿದ್ದ ಸ್ವರ್ಣ ಕಂಡಳು. "ಓಹ್ ಎಂತ ಚೆಲುವೆ ಇವಳು... ಬಟ್ಟಳು ಕಂಗಳು, ಕೆಂ.... " ಅಮ್ಮ ಹಿಂಗೈಯಲ್ಲಿ ತಿವಿಯಲು ವಾಸ್ತವಕ್ಕೆ ಬಂದ ಅರುಣ ಸ್ವರ್ಣಳನ್ನು ನೋಡಿ ಮುಗುಳ್ನಕ್ಕ. ಅವೆನೆಡೆಗೆ ಸ್ನೆಹದ ನಗೆ ನಕ್ಕಳು ಇವಳು. ಅಂದಾದ ಪರಿಚಯದ ನಂತರ ಇಬ್ಬರ ನಡುವೆ ಸಲುಗೆ ಬೆಳೆಯಿತು. ಸಮಯ ಸಿಕ್ಕಾಗಲ್ಲೆಲ್ಲ ಹರುಟುವುದು ಜಗಳಾಡೊದು ರೂಢಿಯಾಯಿತು.

ಅರುಣನಲ್ಲಿ ನಂಬಿಕೆ ಬಂದ ಮೇಲೆ ಒಂದು ದಿನ ತನ್ನನ್ನು ಕಾಡುತಿರೊ ವಿಷಯ ಅವನಲ್ಲಿ ಹೇಳೊ ಮನಸ್ಸು ಮಾಡುತ್ತಾಳೆ. ತನ್ನ ಮನ ಸೂರೆ ಮಾಡಿರೊನ ಬಗ್ಗೆ ಹೇಳಬೆಕು.. ಆದರೆ ಅವನು ವಿಷಯನ ಗಂಭೀರವಾಗಿ ತೆಗೆದುಕ್ಕೊಳದ್ದಿದ್ದರೆ.. ಗೊಂದಲವಾಯಿತು ಅವಳಿಗೆ. ಕೆಲವೊಮ್ಮೆ ರಾತ್ರಿ ಸರಿ ಸುಮಾರು 8 ನಂತರ ಕೇಳಿ ಬರೊ ಮುರಳಿಯ ಗಾನ.. ನುಡಿಸುವವರು ಯಾರೆಂದು.. ತನ್ನನೇ ಕರೆದಂತೆ ಕೇಳುವುದು.. ತನಗೇ ಇನ್ನು ಸ್ಪಷ್ಟವಾಗದ ವಿಚಾರ ಅರುಣನಿಗೆ ಹೇಗೆ ಹೇಳಲಿ.. ಯಾವತ್ತು ಅವನಿಗದನ್ನು ಕೇಳಿಸೊ ಅವಕಾಶ ಸಿಕ್ಕೆ ಇಲ್ಲ.. ಎನಾದರಾಗಲಿ ಅರುಣನಿಗೆ ನಾಳೆ ಹೇಳಲೆ ಬೇಕೆಂದು ನಿರ್ಧರಿಸುತ್ತಾಳೆ.


ಎಂದಿನಂತೆ ಸಂಜೆ ಹರಟುತ್ತಾ ಜಗುಲಿಯಲ್ಲಿ ಕುಳಿತಿರಲು, ಸ್ವರ್ಣ ತನ್ನನ್ನು ಕಾಡುತ್ತಿರುವ ಕೊಳಲ ನಾದದ ಬಗ್ಗೆ ಹೇಳುತ್ತಾಳೆ.. ಅವಳು ನಿರೀಕ್ಷಿಸಿದಂತೆ ಅರುಣ ಹಾಸ್ಯ ಮಾಡುತ್ತಾನೆ.

" ಸ್ವರ್ಣ ಯಾಕದು ಒಂದು ಮುದುಕಪ್ಪ ನುಡಿಸುತ್ತಿರಬಾರದು.. ಅದು ಯಾಕೆ ನಿನ್ನ ರಾಜಕುಮಾರನೇ ಇರಬೇಕು...ಹ್ಮ್. ?!"

" ನಿನಗೆ ಹೇಗೆ ಹೇಳಲಿ ತಿಳಿಯುತ್ತಿಲ್ಲ.. ಆದರೆ ನನ್ನ ಮನಸು ನಾದಕ್ಕೆ ವಿಚಲಿತವಾಗುತ್ತೆ..ಯಾವ ರಾಗವೊ..ತಿಳಿಯದು... ಆದರೆ ನನ್ನೆ ಕರೆದಂತಾಗುತ್ತದೆ.."

ತನ್ನ ಪ್ರೀತಿಯ ಬಗ್ಗೆ ಹೇಳಬೇಕೆಂದ್ದಿದ್ದ ಅರುಣ, ಸ್ವರ್ಣಳ ತಳಮಳ ನೊಡಿ ಸುಮ್ಮನಾಗುತ್ತಾನೆ.

ಅವಳು ಕೊಳಲನ್ನು ನುಡಿಸುವವನ್ನನ್ನು ನೋಡಲು ತಾನು ಮಾಡಿದ ಪ್ರಯತ್ನದ ಬಗ್ಗೆ ಹೇಳುತ್ತಾಳೆ.. ಬೇರೇನೊ ಉತ್ತರ ಹುಡುಕುವಂತೆ ಅರುಣನ ಮುಖ ದಿಟ್ಟಿಸುತ್ತಾ.

ಒಂದು ದಿನ ಸಂಜೆ ಮಾವಿನ ಮಿಡಿ ಉಪ್ಪಿನ ಜೊತೆ ಸವಿಯುತ್ತ ಕುಳಿತ್ತಿದ್ದರು ಅವರಿಬ್ಬರು. ಕೇಳಿ ಬಂತು ಮುರಳಿ ಸ್ವರ. ಅರುಣ ಸ್ವರ್ಣಳ ಮುಖ ನೋಡುತ್ತನೆ.. ಅವಳು ಏನೊ ಹೇಳ ಹೊರಟವಳು ತುಟಿ ಬಿಗಿಯುತ್ತಳೆ. ಅವಳ ಮನಸಿನ ತುಂಬಾ ನೂರು ಪ್ರಶ್ನೆಗಳು.


ಇನ್ನೊಂದು ದಿನ ಅರುಣ ಅವಳ ಜೊತೆಗಿರಬೇಕಾದರೆ ಮತ್ತೊಮ್ಮೆ ಕೇಳಿ ಬಂತು ಕೊಳಲ ಧ್ವನಿ. ನೋಡಲು ಬರುವೆಯಾ ಎಂದೆನ್ನುತ್ತಾ ಧ್ವನಿ ಬಂದೆಡೆಗೆ ಸಾಗುತ್ತಾನೆ ಅರುಣ. ಸ್ವರ್ಣ ಹಿಂಬಾಲಿಸುತ್ತಾಳೆ.

ಇನ್ನೇನು ಧ್ವನಿ ಬಂದಲ್ಲಿ ತಲುಪಬೇಕೆನ್ನುವಷ್ಟರಲ್ಲಿ ಅದು ನಿಂತು ಬಿಡುತ್ತೆ. ಸ್ವರ್ಣ ಸ್ವಲ್ಪ ಮುಂದೆ ಹೋಗಿ ಕಣ್ಣಾಡಿಸಬೇಕಾದರೆ ಸ್ವಲ್ಪೆ ದೂರದಲ್ಲಿ ಒಂದು ಪೀಚಲು ದೇಹದ ವ್ಯಕ್ತಿ ನೆರಳ ಮರೆಯಲ್ಲಿ ಕಾಣೆಯಾಗುತ್ತಾನೆ.


ಹಿಂತಿರುಗಿದ ನಂತರ ಅರುಣ ಸ್ವರ್ಣಳನ್ನು ಚೆಡಿಸುತ್ತಾನೆ.. ಕೃಶ ಕಾಯದ ಅವಳ ಕನಸಿನ ಕುವರನ ಬಗ್ಗೆ. ಘಟನೆಯ ನಂತರವು ಸ್ವರ್ಣಳಿಗೆ ಮಾತ್ರ ರಾಗದ ಮೊಹ ಕಮ್ಮಿಯಾಗಲ್ಲಿಲ್ಲ. ಆದರೆ ಮತ್ತೆ ತುಂಬ ದಿನಗಳವರೆಗೆ ಕೊಳಲ ನಾದದ ಪತ್ತೆಯೇ ಇರಲ್ಲಿಲ್ಲ.. ಅದ್ದನ್ನು ಮರೆಯುತ್ತಾಳೊ ಎಂದು ಕಾಯುತ್ತಿದ್ದ ಅರುಣನ ನಿರೀಕ್ಷೆ ಸುಳ್ಳಾಯಿತು.

ಅದರೆ ಅಂದೊಂದು ದಿನ ಇದ್ದಕ್ಕಿದಂತೆಯೆ ಕೇಳಿ ಬಂತು ಅವಳಿಗೆ ತೀರಾ ಪರಿಚಯವಾಗಿರೊ ಸ್ವರ.. ತನ್ನನ್ನು ಬಾ ಎಂದಂತೆ ಭಾಸವಾಯಿತು ಅವಳಿಗೆ.. ವ್ಯಕ್ತಿಯ ನೋಡೆ ಬಿಡುತ್ತೇನೆ ಎಂದು ಹೊರಟವಳಿಗೆ ಅರುಣ ಎಂದಿನಂತೆ ಕಾಣೆಯಾಗಿರುವುದು ನಿರಾಸೆಯಾಯಿತು. ಆದರು ಧೈರ್ಯ ಮಾಡಿ ಸ್ವರದ ಜಾಡಲ್ಲಿ ನಡೆದವಳಿಗೆ ಸ್ವರ ಹೂದೊಟದ ಪಕ್ಕದ ಮಾವಿನ ಮರದ ಕೆಳಗಿನಿಂದ ಬರುತ್ತಿರುವುದು ಸ್ಪಷ್ಟವಾಯಿತು. ಚಂದ್ರನ ಬೆಳಕಲ್ಲಿ ವ್ಯಕ್ತಿಯ ಚಹರೆ ಇನ್ನೇನು ನೋಡಬೇಕು ಎನ್ನುವಷ್ಟರಲ್ಲಿ ಬಳ್ಳಿಯೊಂದಕ್ಕೆ ಎಡವಿ ಸ್ವರ್ಣ ಆಯತಪ್ಪುತ್ತಾಳೆ.


ನಿದಾನಕ್ಕೆ ಕಣ್ತೆರದವಳಿಗೆ ತಾನು ಯಾರದೊ ಮಡಿಲಲ್ಲಿ ಮಲಗಿರುವುದು ಗೊತ್ತಾದಾಗ ಮುಖವೆತ್ತಿ ನೊಡುತ್ತಳೆ. ಚಕಿತಳಾಗುತ್ತಾಳೆ.

ಎಷ್ಟೊ ದಿನಗಳಿಂದ ಕಾಡುತ್ತಿದ್ದ ರಾಗದೊಡೆಯ ಅರುಣನೆಂದು ತಿಳಿದಾಗ, ತನ್ನ ಮನಸಿನ್ನೊಳಗಿದ್ದ ನಿರೀಕ್ಷೆ ನಿಜವಾದಾಗ ಪರವಶಳಾಗುತ್ತಾಳೆ. ಅದರೆ ಅಂದು ತಾನು ನೋಡಿದ್ದು ನೆನೆದು ಗೊಂದಲಗೊಳಗಾಗುತ್ತಾಳೆ. ಅವಳ ಪ್ರಶ್ನಾರ್ತಕ ಕಣ್ಣುಗಳನ್ನು ಕಂಡ ಅರುಣ ಕಿರು ನಗುತ್ತಾ ತನ್ನ ಗೆಳೆಯ ನುಡಿಸಿದ ಮುದ್ರಿತ ಧ್ವನಿಯ ರಹಸ್ಯ ಹೇಳುತ್ತಾನೆ.

ಅರುಣ ತನ್ನ ಮಡಿಲ್ಲಲ್ಲಿ ಮಲಗಿರೊ ತನ್ನ ಕನಸಿನ ಕನ್ನಿಕೆಯನ್ನ ನಿಧಾನವಾಗಿ ಮೇಲೆಬ್ಬಿಸಿ ನಿಲ್ಲಲು ಸಹಾಯ ಮಾಡುತ್ತಾನೆ.

ತನ್ನ ಹೃದಯಕ್ಕೆ ಗೊತ್ತಾದ ಸತ್ಯ ತನಗರಿವಾಗಲು ಎಷ್ಟೊಂದು ಸಮಯವಾಯಿಲ್ಲ ಎಂದು ಅಂದುಕೊಳ್ಳುತ್ತಾ, ಅವನ ಕೈಯಿಂದ ಕೊಳಲನು ಮೆಲ್ಲನೆ ತನ್ನ ಕೈಗೆತ್ತಿಕೊಳ್ಳುತ್ತಾಳೆ. ರಾಗಕ್ಕೆ ಅವನು ಉಸಿರಿಡೊ ಬಿಂದುವಿಗೆ ತನ್ನ ತುಟಿಯೊತ್ತಿ ಹಿಂದಿರುಗಿಸುತ್ತ.. "ಮತ್ತೊಮ್ಮೆ ನನಗಾಗಿ ನುಡಿಸುವೆಯ ?" ಎಂದಾಗ, ಅರುಣ ಮೆಲ್ಲನೆ ಅವಳ ಕಣ್ಣುಗಳ ಮೇಲೆ ಚುಂಬಿಸಿ ತನ್ನ ಮನೊರಮೆಗಾಗಿ ಕೊಳಲಿಗೆ ತನ್ನ ಉಸಿರಿಡುತ್ತಾನೆ.


ಬೆಳದಿಂಗಳಲ್ಲಿ ಹೊಸ ಪ್ರೇಮ ಚಿಗುರಿದಾಗ.. ರಾಗ ಅನುರಾಗವಾಯಿತು.

9 comments:

  1. ಕಥೆ ಚೆನ್ನಾಗಿದೆ..ಹೀಗೆ ಬರೆಯುತ್ತೀರಿ.
    ನಿಮ್ಮವ,
    ರಾಘು.

    ReplyDelete
  2. @Raghu,

    ಧನ್ಯವಾದಗಳು.. ಬರುತ್ತಿರಿ.

    ReplyDelete
  3. @Dileep Hegde,

    Thank you for commenting. :)
    When I tried publishing your comment it vanished into infinity ! Sorry..

    Keep visiting..

    ReplyDelete
  4. @ಕತ್ತಲೆ ಮನೆ...,

    ಧನ್ಯವಾದಗಳು

    ReplyDelete
  5. chennaagide... antya chennaagide... bareyuttaa iri...

    ReplyDelete
  6. @ದಿನಕರ ಮೊಗೇರ,

    ಧನ್ಯವಾದಗಳು..:) ಬರುತ್ತಿರಿ..

    ReplyDelete
  7. Thumba chennagide Shravana.. Keep Writing..

    -
    Vandana

    ReplyDelete